ಅರಸೊತ್ತಿಗೆ : ಸಾರ್ವಭೌಮತ್ವವನ್ನು ಸೂಚಿಸುತ್ತ್ತದೆ. ಸಾಮಾನ್ಯವಾಗಿ ದೇಶದ
ಒಂದು ಕುಟುಂಬದಲ್ಲಿ ಮಾತ್ರವೇ ಅಡಕವಾಗಿರುವುದು ರೂಢಿ. ಹೆಚ್ಚಾಗಿ ವಂಶಪಾರಂಪರ್ಯ
ವಾಗಿ ನಡೆದುಬರುತ್ತಿತ್ತು. ಒಮ್ಮೊಮ್ಮೆ ಅರಸರನ್ನು ಚುನಾಯಿಸುವ ಕ್ರಮವೂ ಇತ್ತು.
ಅರಸೊತ್ತಿಗೆಯ ಮೂಲ ಮತ್ತು ಅದರಲ್ಲಿ ಅಂತರ್ಗತವಾಗಿರುವ ಸರ್ವಾಧಿಕಾರ
ದೈವನಿರ್ಮಿತ ಎಂಬ ಸಿದ್ಧಾಂತ ಯುರೋಪಿನಲ್ಲಿ 17ನೆಯ ಶತಮಾನದಲ್ಲಿ ಪ್ರಚಲಿತವಾಗಿತ್ತು. 
ಅರಸೊತ್ತಿಗೆ ರಾಜಕುಟುಂಬದ ಹಿರಿಯನಿಗೆ ಮಾತ್ರ ಪ್ರಾಪ್ತವಾಗುವ ಪದ್ಧತಿ. ಕುಟುಂಬದ
ಕಲಹಗಳನ್ನು ತಡೆಗಟ್ಟಲು ಅನುಕೂಲವಾಗುವುದಕ್ಕಾಗಿ ಈ ಪದ್ಧತಿ ಬೆಳೆದುಬಂದಿದೆ.
ಕೆಲವು ದೇಶಗಳಲ್ಲಿ ಸ್ತ್ರೀಯರು ಅರಸೊತ್ತಿಗೆಗೆ ಅನರ್ಹರಾಗಿರುವುದರಿಂದ ಕಲಹಸಂಭವ
ಇನ್ನೂ ಕಡಿಮೆಯಾಗಿದೆ. ಅರಸೊತ್ತಿಗೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ಅಡಕಮಾಡುವ
ಪದ್ಧತಿ ಪೂರ್ವರಾಷ್ಟ್ರಗಳಿಂದ, ಕೈಸ್ತ್ತಧರ್ಮದಿಂದ ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಗಿದೆ.
ಆದರೆ ಮತೀಯಕೇತ್ರ ಅಥವಾ ಧಾರ್ಮಿಕರಂಗದಲ್ಲೂ ಅರಸನ ಸಾರ್ವಭೌಮತ್ವ 16ನೆಯ
ಶತಮಾನದ ಪ್ರಾಟೆಸ್ಟೆಂಟ್ ಸುಧಾರಣೆಯ ಅನಂತರ ಪ್ರಾಟೆಸ್ಟೆಂಟ್ ರಾಷ್ರ್ಟಗಳಲ್ಲಿ ಮಾತ್ರವೇ
ಆರಂಭವಾಯಿತು.

ಪ್ರಜಾಪ್ರಭುತ್ವದ ಬೆಳವಣಿಗೆಗೆ ಮತ್ತು ಪ್ರಭಾವದಿಂದ ಅರಸೊತ್ತಿಗೆ ಒಂದು ಕಾಲದ
ವೈಭವ,  ಅಧಿಕಾರವನ್ನೆಲ್ಲ ಕಳೆದುಕೊಂಡು ಹೆಸರನ್ನು ಮಾತ್ರ ಉಳಿಸಿಕೊಂಡಿದೆ. ಇಂಗ್ಲೆಂಡ್
ಇದಕ್ಕೆ ಉದಾಹರಣೆ.  ಸ್ವಾತಂತ್ರ್ಯಾನಂತರ ಭಾರತದ ಪುನರ್‍ನಿರ್ಮಾಣವಾದಾಗ ಅಲ್ಲಿನ
600ಕ್ಕೂ ಮೇಲ್ಪಟ್ಟ ಅರಸೊತ್ತಿಗೆಗಳು ಕಮೇಣ ರದ್ದಾಗಿವೆ.
(ವಿ.ಆರ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ